Advertisement
ಆತ್ಮೀಯ ಕನ್ನಡಿಗರೇ ಹಾಗೂ ಪರಿಸರ ಪ್ರೇಮಿಗಳೇ,ಪಶ್ಚಿಮ ಘಟ್ಟಗಳ ಅಖಂಡ ಸೌಂದರ್ಯ ಮತ್ತು ಜೀವ ವೈವಿಧ್ಯದ ಸಂಕೇತವಾಗಿರುವ ನಮ್ಮ ಉತ್ತರ ಕನ್ನಡ ಹಾಗೂ ಕರಾವಳಿಯ ಜೀವ ನದಿಗಳಾದ ಬೆಡ್ತಿ, ಅಘನಾಶಿನಿ ಮತ್ತು ಗಂಗಾವಳಿ ಇಂದು ಅವೈಜ್ಞಾನಿಕ ಯೋಜನೆಗಳ ಮಾರಕ ಪ್ರಭಾವಕ್ಕೆ ಸಿಲುಕಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿಯಲ್ಲಿವೆ.
ಉತ್ತರ ಕನ್ನಡ, ಪಶ್ಚಿಮ ಘಟ್ಟ ಮತ್ತು ಕರಾವಳಿ ತಾಲೂಕುಗಳ ಕುಡಿಯುವ ನೀರು, ಮೀನುಗಾರಿಕೆ, ಕೃಷಿ, ಪಟ್ಟಣ ಹಾಗೂ ಗ್ರಾಮಗಳ ಯೋಜಿತ ಕಾರ್ಯಕ್ರಮಗಳು, ರಕ್ಷಣೆ ಮತ್ತು ಸಾರಿಗೆ ಯೋಜನೆಗಳ ಭವಿಷ್ಯದ ನೀರಿನ ಅವಶ್ಯಕತೆಗಳನ್ನು ಕಡೆಗಣಿಸಲಾಗಿದೆ. ಹಳೆಯ ಮಳೆ ಲೆಕ್ಕಾಚಾರದ ಆಧಾರದ ಮೇಲೆ "ಹೆಚ್ಚುವರಿ ನೀರು" ಎಂಬ ಅತಾರ್ಕಿಕ ಹಾಗೂ ಅವೈಜ್ಞಾನಿಕ ವರದಿಗಳನ್ನು ಸೃಷ್ಟಿಸಿ, ಸರ್ವೇ ಮತ್ತು ಯೋಜನೆ ರೂಪಿಸಲಾಗುತ್ತಿದೆ.
ನಾವು ಈಗಲೇ ಇದನ್ನು ವಿರೋಧಿಸದಿದ್ದರೆ, ಮತ್ತೊಂದು 'ಎತ್ತಿನಹೊಳೆ' ಯೋಜನೆಯಂತಹ ಬೃಹತ್ ಆರ್ಥಿಕ ದುರಂತ ಮತ್ತು ಚೇತರಿಸಿಕೊಳ್ಳಲಾಗದ ಪರಿಸರ ನಾಶ ನಮಗೆ ಕಟ್ಟಿಟ್ಟ ಬುತ್ತಿ!
ಈ ನಾಶಕಾರಿ ಯೋಜನೆಗಳನ್ನು ಶಾಶ್ವತವಾಗಿ ಕೈಬಿಡುವಂತೆ ರಾಜ್ಯ ಸರ್ಕಾರವನ್ನು ರಾಜಧಾನಿ ಬೆಂಗಳೂರಿನಲ್ಲಿ ಶಾಂತಿಯುತವಾಗಿ ಎಚ್ಚರಿಸಲು ಬೆಡ್ತಿ - ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ವತಿಯಿಂದ ಬೃಹತ್ ಧರಣಿ ಸಮಾವೇಶವನ್ನು ಆಯೋಜಿಸಲಾಗಿದೆ.
Advertisement
Event venue
Freedom Park,Bangalore, India
Tickets