ನಮ್ಮಈರನಹಟ್ಟಿ

Sun, 10 May, 2026 at 12:00 am UTC+05:30

Sampangiram Nagar | Bangalore

\u0ca8\u0cae\u0ccd\u0cae \u0c88\u0cb0\u0ca8\u0cb9\u0c9f\u0ccd\u0c9f\u0cbf
Publisher/Hostನಮ್ಮ ಈರನಹಟ್ಟಿ
\u0ca8\u0cae\u0ccd\u0cae\u0c88\u0cb0\u0ca8\u0cb9\u0c9f\u0ccd\u0c9f\u0cbf
Advertisement
ಅಭಿವೃದ್ಧಿ ಹೆಸರಿನಲ್ಲಿ ಕಾಡುನಾಶ ಆಗಿದ್ದು ಆಯ್ತು. ಈಗ ಶಿಕ್ಷಣ ಅಭಿವೃದ್ಧಿ ಸೋಗಿನಲ್ಲಿ ಶಾಲೆಗಳು ನಾಶ ಆಗ್ತಿದೆ ಅಷ್ಟೇ. ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆಸರಿನಲ್ಲಿ ಮಕ್ಕಳಿಗೆ ಅನುಕೂಲ ಆಗುವ ಮತ್ತು ಮಕ್ಕಳಿಗೆ ಹತ್ತಿರ ಆಗುವ ಶಾಲೆಗಳನ್ನು ಮುಚ್ಚಿ ಒಂದು ದೊಡ್ಡ ಶಾಲೆ ಮಾಡುವುದು. ಆರರಿಂದ ಏಳು ಕಿಲೋಮೀಟರ್ ದೂರದ ಶಾಲೆಗೆ ಮಕ್ಕಳು ಹೇಗೆ ಹೋಗಬೇಕು. ಬಸ್ ಇಲ್ವಾ ಅಂತ ಕೇಳಿದ್ರೆ ಬಸ್ಸು ಇದ್ದಾವೆ. ಅವು ಸಮಯ ಬಿಟ್ಟು ಸಮಯದಲ್ಲಿ ಬರೋದು. ಬಂದರೂ ಬಸ್ಸು ತುಂಬಾ ದೊಡ್ಡವರು ಮಕ್ಕಳಿಗೆ ಅನುಕೂಲ ಆಗೋದಿಲ್ಲ.
ಶಾಲೆ ಹತ್ತಿರ ಇದ್ದರೆ ಕಾಲ್ನಡಿಗೆಯಲ್ಲಿ ಮಕ್ಕಳು ಶಾಲೆಗೆ ಹೋಗ್ತಾರೆ. ಆ ವಿಚಾರ ಈ ಸರ್ಕಾರಕ್ಕೆ ಯಾಕೆ ಬರುವುದಿಲ್ಲ.
ರಾಜ್ಯದಲ್ಲಿ 2026ರ ಮುಂದಿನ ವರ್ಷದಲ್ಲಿ ಬರೋಬ್ಬರಿ 7000 ಸರ್ಕಾರಿ ಶಾಲೆಗಳು ಬಂದ್.!
700 ಹೊಸ ಕೆಪಿಎಸ್ ಶಾಲೆಗಳು – 7000 ಶಾಲೆಗಳ ವಿಲೀನ
ಈ ಉದಾಹರಣೆಯಂತೆ ರಾಜ್ಯದಲ್ಲಿ 2026-27ನೇ ಶೈಕ್ಷಣಿಕ ಸಾಲಿನಿಂದ ಗ್ರಾಮ ಪಂಚಾಯಿತಿಗೊಂದು ಕೆಪಿಎಸ್ ಶಾಲೆಯನ್ನಾಗಿ ಮಾಡಲು ಸರ್ಕಾರ ಅನುಮೋದನೆ ನೀಡಿದೆ. ಈಗಾಗಲೇ 700 ಹೊಸ ಕೆಪಿಎಸ್ ಶಾಲೆಗಳನ್ನು (ಕಲ್ಯಾಣ ಕರ್ನಾಟಕದಲ್ಲಿ 200 ಸೇರಿ) ಆರಂಭಿಸಲು ತೀರ್ಮಾನಿಸಲಾಗಿದೆ. ಪ್ರತಿ ಕೆಪಿಎಸ್ ಶಾಲೆಗೆ ಸುತ್ತಲು 5ರಿಂದ 10 ಕಿ.ಮೀ. ವ್ಯಾಪ್ತಿಯಲ್ಲಿರುವ ಕನಿಷ್ಠ 5ರಿಂದ ಗರಿಷ್ಠ 10 ಶಾಲೆಗಳನ್ನು ವಿಲೀನಗೊಳಿಸುವ ಪ್ರಕ್ರಿಯೆ ಸದ್ದಿಲ್ಲದೆ ಆರಂಭವಾಗಿದೆ. ಇದರಿಂದ ಮುಂದಿನ ಸಾಲಿನಲ್ಲಿ 5,000ರಿಂದ 7,000 ಸರ್ಕಾರಿ ಶಾಲೆಗಳು ವಿಲೀನಗೊಂಡು ಬಂದ್ ಆಗುವ ಸಾಧ್ಯತೆ ಇದೆ.
ಈಗಾಗಲೇ 307 ಕೆಪಿಎಸ್ ಶಾಲೆಗಳು
ರಾಜ್ಯದಲ್ಲಿ ಈಗಾಗಲೇ 307 ಕೆಪಿಎಸ್ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಲ್ಲಿ ಸಾವಿರಾರು ಸಣ್ಣ ಶಾಲೆಗಳನ್ನು ಹಿಂದೆ ವಿಲೀನಗೊಳಿಸಲಾಗಿದೆ. ಇದೀಗ ಹೊಸದಾಗಿ 700 ಕೆಪಿಎಸ್ ಶಾಲೆಗಳು ಆರಂಭವಾದರೆ ಒಟ್ಟು ಸಂಖ್ಯೆ 1,000ಕ್ಕೂ ಮೀರಲಿದೆ. ಜಿಲ್ಲಾ ಡಿಡಿಪಿಐಗಳು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ವಿಲೀನ ಪ್ರಕ್ರಿಯೆಯನ್ನು ಶಾಂತವಾಗಿ ನಡೆಸಲಾಗುತ್ತಿದೆ.
ಶಿಕ್ಷಕರ ಕೊರತೆ ಮತ್ತು ಮೂಲಸೌಕರ್ಯ ಸಮಸ್ಯೆ
ರಾಜ್ಯದಲ್ಲಿ 60,000ಕ್ಕೂ ಹೆಚ್ಚು ಶಿಕ್ಷಕರ ಕೊರತೆ ಇದೆ. ಪ್ರತಿ ವರ್ಷ 6,000 ಶಿಕ್ಷಕರು ನಿವೃತ್ತರಾಗುತ್ತಿದ್ದಾರೆ. ಆದರೆ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ಸರ್ಕಾರಗಳು ಆಸಕ್ತಿ ತೋರಿಲ್ಲ. ಕಡಿಮೆ ಮಕ್ಕಳಿರುವ ಶಾಲೆಗಳಲ್ಲಿ ಕನಿಷ್ಠ ವಿಷಯಕ್ಕೊಬ್ಬ ಅಥವಾ ತರಗತಿಗೊಬ್ಬ ಶಿಕ್ಷಕರನ್ನು ನೇಮಿಸುವಂತೆ ಶಿಕ್ಷಕ ಸಂಘಗಳು ಆಗ್ರಹಿಸಿವೆ. ತರಗತಿ ಕೊಠಡಿ, ಬೋಧನಾ ಸಾಮಗ್ರಿ, ಬಿಸಿಯೂಟ ಕೊಠಡಿ, ಗ್ರಂಥಾಲಯ, ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಸಮಸ್ಯೆಗಳಿವೆ.
ಶಾಲೆಗಳ ಸಂಖ್ಯೆಯಲ್ಲಿ ಇಳಿಕೆ
2010ರಲ್ಲಿ ರಾಜ್ಯದಲ್ಲಿ 50,000 ಸರ್ಕಾರಿ ಶಾಲೆಗಳಿದ್ದವು. ಈಗ ಅದು 46,000ಕ್ಕೆ ಇಳಿದಿದೆ. ಕಳೆದ 15 ವರ್ಷಗಳಲ್ಲಿ ಮಕ್ಕಳ ದಾಖಲಾತಿ ಶೇ.30ರಷ್ಟು ಕುಸಿದಿದೆ. 50ಕ್ಕಿಂತ ಕಡಿಮೆ ಮಕ್ಕಳಿರುವ 25,000ಕ್ಕೂ ಹೆಚ್ಚು ಶಾಲೆಗಳಿವೆ. ಹಂತಹಂತವಾಗಿ ಈ ಶಾಲೆಗಳನ್ನು ಕೆಪಿಎಸ್‌ಗಳಲ್ಲಿ ವಿಲೀನಗೊಳಿಸುವ ಯೋಜನೆ ಸರ್ಕಾರದ್ದಾಗಿದೆ.
ಶಿಕ್ಷಣ ತಜ್ಞರ ಆತಂಕ
ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಅವರು ಈ ನಿರ್ಧಾರವನ್ನು ಟೀಕಿಸಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಪಾಲಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಾರದೆ ಸಚಿವರು ಈ ನಿರ್ಧಾರ ತೆಗೆದುಕೊಂಡಂತೆ ಕಾಣುತ್ತದೆ. ಈ ಬಗ್ಗೆ ಮುಖ್ಯಮಂತ್ರಿಗಳೇ ಜನತೆಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ವಿಲೀನಕ್ಕೆ ಕಾರಣಗಳು
ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು
ಶಿಕ್ಷಕರು, ಕಟ್ಟಡ, ಮೂಲಸೌಕರ್ಯಗಳ ಕೊರತೆ
ಗ್ರಾ.ಪಂ.ಗೊಂದು ಕೆಪಿಎಸ್ ಆರಂಭಿಸಿ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಏಕಕಾಲಿಕ ಶಿಕ್ಷಣ
ಸುತ್ತಲಿನ 5-10 ಶಾಲೆಗಳ ವಿಲೀನ
##ನಮ್ಮಈರನಹಟ್ಟಿ
Advertisement

Event Venue

Sampangiram Nagar, Bangalore, India

Tickets

Icon
Concerts, fests, parties, meetups - all the happenings, one place.

Discover more events by tags:

Education in Bangalore

Ask AI if this event suits you:

More Events in Bangalore

12th International Agarbatti & Perfume Expo 2026
Sat, 09 May at 10:00 am 12th International Agarbatti & Perfume Expo 2026

BIEC - Bangalore International Exhibition Center

Kumar Sanu in Bengaluru
Sat, 09 May at 06:30 pm Kumar Sanu in Bengaluru

Phoenix Market City

A for Aneez - an Adult Standup Comedy Show
Sat, 09 May at 07:00 pm A for Aneez - an Adult Standup Comedy Show

Just BLR Comedy Club: Bengaluru

Walkathon - Step Forward, Give Back!
Sun, 10 May at 05:30 am Walkathon - Step Forward, Give Back!

St Josephs Indian Institute, opposite Kanteerva Stadium

Walkathon Bangalore \u2013 Step Forward Give Back
Sun, 10 May at 06:00 am Walkathon Bangalore – Step Forward Give Back

St. Joseph's Indian Institutions, Bangalore

Happy Second Anniversary!
Sun, 10 May at 09:00 am Happy Second Anniversary!

3rd A Cross, 400 meters behind Shell Petrol Bunk,, Bangalore, Karnataka, India

Yaari
Sun, 10 May at 12:30 pm Yaari

Sampangiram Nagar

Mochakk India Tour
Sun, 10 May at 12:30 pm Mochakk India Tour

District Arena @ Terraform

RABINDRA NAZRUL SONDHA
Sun, 10 May at 06:00 pm RABINDRA NAZRUL SONDHA

Mugabu Sports: Bengaluru

Bangalore is Happening!

Never miss your favorite happenings again!

Explore Bangalore Events