Advertisement
ಇದು ಹೊಸದುರ್ಗ ಕಾರ್ಮಿಕ ಇಲಾಖೆ ಪ್ರಕಟಣೆ ಕಟ್ಟಡ ಕಾರ್ಮಿಕರ ಕಾರ್ಡ್ ಅಥವಾ ಲೇಬರ್ ಕಾರ್ಡ್ ಇರುವಂತಹ ಎಲ್ಲಾ ಫಲಾನುಭವಿಗಳು ಮತ್ತು ಅವರ ಅವಲಂಬಿತರು ಕಡ್ಡಾಯವಾಗಿ ಆರೋಗ್ಯ ಘಟಕದಲ್ಲಿ ಕಡ್ಡಾಯ ನೋಂದಣಿ ಮಾಡಿಸಬೇಕು ಹಾಗೆ ಆರೋಗ್ಯ ತಪಾಸಣೆ ಮತ್ತು ತರಬೇತಿ ಶಿಬಿರವಿದ್ದು ಎಲ್ಲಾ ಫಲಾನುಭವಿಗಳು ದಿನಾಂಕ :12/03/2025 ಬೆಳಗ್ಗೆ 9:00 ಗಂಟೆಯಿಂದ 6:00 ವರೆಗೆ ಮಾಡದಕೆರೆ ಪಂಚಾಯಿತಿ ಹತ್ತಿರ ತಮ್ಮ ಲೇಬರ್ ಕಾರ್ಡ್ ಅಥವಾ ಕಾರ್ಮಿಕರ ಕಾರ್ಡ್ ಆಧಾರ ಕಾರ್ಡ್ ಮತ್ತು ಅವರ ಅವಲಂಬಿತರ ಆಧಾರ್ ಕಾರ್ಡ್ ತೆಗೆದುಕೊಂಡು ಬಂದು ನೋಂದಣಿ ಮಾಡಿಸಬೇಕು ಇದು ಕರ್ನಾಟಕ ಸರ್ಕಾರ, ಕಾರ್ಮಿಕ ಇಲಾಖೆಯ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಇವರ ವತಿಯಿಂದ. ನೋಂದಾಯಿತಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ , ಮಾಡದಕೆರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ವನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ 20 ತರಹದ ಆರೋಗ್ಯ ತಪಾಸಣೆ ಯನ್ನು ಮಾಡಲಾಗುವುದು. 17 ತರಹದ ಬಹುಮುಖ್ಯ ರಕ್ತ ಪರೀಕ್ಷೆಗಳು, ವೈದ್ಯರಿಂದ ದೈಹಿಕ ಪರೀಕ್ಷೆ ಮತ್ತು ಸಲಹೆ, ನೇತ್ರ ಪರೀಕ್ಷೆಕರಿಂದ ಕಣ್ಣಿನ ಪರೀಕ್ಷೆ, ಶ್ರವಣ ಪರೀಕ್ಷೆಕರಿಂದ ಕಿವಿಯ ಪರೀಕ್ಷೆ ಈ ಎಲ್ಲಾ ಪರೀಕ್ಷೆಗಳನ್ನು ಅತ್ಯಾಧುನಿಕ ಉಪಕರಣಗಳನ್ನು ಬಳಸಿ ಮಾಡಲಾಗುತ್ತದೆ ಹಾಗೂ ಈ ಪರೀಕ್ಷೆಗಳ ವರದಿಯಲ್ಲಿ ಏನಾದರೂ ಸಮಸ್ಯೆ ಇದೆ ಎಂದು ಕಂಡುಬಂದಲ್ಲಿ ಚಿಕಿತ್ಸಾ ಭಾಗ್ಯ ಯೋಜನೆಯ ಅಡಿಯಲ್ಲಿ ಹೆಚ್ಚಿನ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದೆ, ಈ ಯೋಜನೆಯು ಕಾರ್ಮಿಕರ ಹಿತದೃಷ್ಟಿಯಿಂದ ಸರ್ಕಾರದ ಮಹತ್ವಾಕಾಂಶಿ ಯೋಜನೆಯಾಗಿದ್ದು. ಕಾರ್ಮಿಕರು ಸೂಕ್ತ ದಾಖಲೆಯೊಂದಿಗೆ ಅಂದರೆ ಕಾರ್ಮಿಕರ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ನೊಂದಿಗೆ ಬಂದು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ
Advertisement
Event Venue & Nearby Stays
Sampangiram Nagar, Bangalore, India